ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಂತ್ಯಂತ ಸೂಕ್ತ ಹೆಸರು..?

Advertisements

12 thoughts on “ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಂತ್ಯಂತ ಸೂಕ್ತ ಹೆಸರು..?

 1. Hey man…
  your blogs are good and fantastically Barediddeya …

  I need a help from you…
  i posted a page in kannada, i can view it in my computer, but others cant (it looks scrambled for them)
  Can you please tell me how to post a page for WordPress in kannada…..

  regards..
  Dr. Chandrashekar

 2. ಮೈಸೂರು ವಿಮಾನ ನಿಲ್ದಾಣ ಇನ್ನೂ ಸಿದ್ಧವಾಗುವ ಮೊದಲೇ ಕೆಲವರು ಅದಕ್ಕೆ ‘ವಿಶ್ವೇಶ್ವರಯ್ಯ ವಿಮಾನ ನಿಲ್ದಾಣ’ ಎಂಬ ಫಲಕವನ್ನು ನೆಡಲು ಹೋದುದು ದುಡುಕಿನ ಕ್ರಮವಾಗಿದೆ. ‘ಮೈಸೂರು ವಿಮಾನ ನಿಲ್ದಾಣ’ ಎಂಬ ಹೆಸರೇ ವಿಮಾನ ನಿಲ್ದಾಣಕ್ಕೆ ಇರಲಿ. ಕನ್ನಡ ಪದವನ್ನು ಇಂಗ್ಲಿಷ್ ಸಾಂಪ್ರದಾಯಿಕ ಕಾಗುಣಿತದಲ್ಲಿ ಬರೆಯದೆ ಧ್ವನಿ ವಿಜ್ಞಾನದ ಸಾಮಾನ್ಯ ನಿಯಮದಂತೆ ಮಾತ್ರ ಬರೆಯಲಿ. ಮೈಸೂರು ಎನ್ನುವುದನ್ನು ಎಂ ಎಐ ಎಸ್ ಯು(ಯು) ಆರ್ ಯು ಎಂದೇ ಬರೆಯಲಿ.

  ಎಂ ಮತ್ತು ವೈ ಗಳನ್ನು ಇಂಗ್ಲಿಷಿನಲ್ಲಿ ಮಾತ್ರ ಒಟ್ಟಾಗಿ ಮೈ( ‘ನನ್ನ’ )ಎಂದು ಉಚ್ಚರಿಸಬಹುದು. ಕನ್ನಡದಲ್ಲಿ ಅವು ಎರಡು ಕೇವಲ ವ್ಯಂಜನಗಳು. ಕನ್ನಡ ಸ್ವರ ಐ ಅನ್ನು ಇಂಗ್ಲಿಷಿನಲ್ಲಿ ಎಮತ್ತುಐ ಎರಡನ್ನೂ ಅನುಕ್ರಮವಾಗಿಯೇ ಬರೆಯಬೇಕು. ಎಸ್ ಎಂದರೆ ಸ , ಯು ಯು ಎಂದು ಎರಡು ಬಾರಿ ಬರೆದು ಊ ಎಂಬ ಸ್ವರವನ್ನೂ ಸೂಚಿಸಬೇಕು. ಎಸ್ ಒ ಒ ಎಂದು ಬರೆಯಲೇಕೂಡದು. ಹಾಗೆ ಬರೆದಾಗ ಅದರ ಉಚ್ಚಾರಣೆ ಸೋ ಎಂದಾಗುತ್ತದೆ. ಗೂಗಲ್ ಭೂಪಟದಲ್ಲಿಯೂ ಮೈಸೂರು ಎನ್ನುವುದನ್ನು ಎಂ ವೈ ಎಸ್ ಯು ಆರ್ ಯು ಎಂದು ತಪ್ಪಾಗಿ ಬರೆಯಲಾಗಿದೆ. ಕನ್ನಡಿಗರು ಗೂಗಲ್ ಗೆ ಸರಿಪಡಿಸುವಂತೆ ಒತ್ತಾಯಿಸಬೇಕು. .

 3. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸದಾಗಿ ವ್ಯಕ್ತಿಗಳು ಯಾರ ಹೆಸರನ್ನೂ ಬೇಡ. ವ್ಯಕ್ತಿಗಿಂತ ಊರು ದೊಡ್ಡದು; ಸಾರ್ವತ್ರಿಕವಾದುದು, ಚಾರಿತ್ರಿಕವಾದುದು. ಅದನ್ನು ಬದಲಾಯಿಸಿದರೆ ಚರಿತ್ರೆಯನ್ನೇ ಅಗೌರವಿಸಿದಂತೆ. ‘ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂಬ ಹೆಸರೇ ಸಾಕು.

  ಬೆಂಗಳೂರು ಎಂಬ ಕನ್ನಡ ಹೆಸರು ಪರಕೀಯರ ಬಾಯಲ್ಲಿ ಬ್ಯಾಂಗಲೋರ್, ಬಂಗಲೋರ್ (ಬಿ ಇ ಎನ್ ಜಿ ಎ ಎಲ್ ಒ ಆರ್ ಇ)ಎಂದೂ ಮತ್ತು ನಮ್ಮವರ ಕೈಯಲ್ಲಿ ವಿಕೃತವಾಗಿ ಬೆಂಗಲೋರು (ಬಿ ಇ ಎನ ಜಿ ಎ ಎಲ್ ಒ ಒ ಆರ್ ಯು) ಎಂದೂ ಆಗಿದೆ.

  ಸಂತೋಷದ ಸಂಗತಿ ಎಂದರೆ ಹೊಸ ವಿಮಾನ ನಿಲ್ದಾಣದ ಹೆಸರನ್ನು ಇಂಗ್ಲಿಷಿನಲ್ಲಿ ಬೆಂಗ(ಳೂ)ಲುರು ಎಂದು ಮೂಲ ಉಚ್ಚಾರಣೆಗೆ ಇಂಗ್ಲಷಿನಲ್ಲಿ ಬರೆಯಲು ಅವಕಾಶವಿರುವಷ್ಟು ಸಮೀಪದ ಕಾಗುಣಿತದಲ್ಲಿ ಬರೆದಿರುವುದು( ಬಿ ಇಎನ್ ಜಿ ಎ ಎಲ್ ಯು ಆರ್ ಯು).

  ಕಿತ್ತೂರು ಚನ್ನಮ್ಮ, ಟಿಪ್ಪು ಅವರ ಹೆಸರುಗಳನ್ನು ಪ್ರಸಿದ್ಧ ರೈಲುಗಳಿಗೆ, ವಿಶ್ವೇಶ್ವರಯ್ಯ ಅವರ ಹೆಸರನ್ನು ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ, ತಾಂತ್ರಿಕ ವಿಶ್ವವಿದ್ಯಾನಿಲಯ ಮೊದಲಾದವಕ್ಕೆ ಈಗಾಗಲೇ ಇಡಲಾಗಿದೆ. ಬೆಂಗಳೂರು ಬಸ್ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇದೆ.

  ಆದ್ದರಿಂದ ಹೊಸ ಸ್ಥಳಗಳಿಗೆ ಹೆಸರಿಡುವಾಗಲೂ ಈಗಾಗಲೇ ಸಾರ್ವಜನಿಕ ಸ್ಥಳಗಳಿಗೆ ಹೆಸರಿಟ್ಟಿರುವವರ ಹೆಸರು ಖಂಡಿತಾ ಬೇಡ. ನಾಡು ನುಡಿಗೆ ದುಡಿದ ಇನ್ನೂ ಹಲವು ಹಿರಿಯರ ಹೆಸರುಗಳಿವೆ. ಅವುಗಳಲ್ಲಿ ಒಂದನ್ನು ಪ್ರಜಾಸತ್ತತಾತ್ಮಕವಾಗಿ ಆಯ್ಕೆ ಮಾಡಿ ಇಡಲಿ.

  ಹಿರಿಯರ ಹೆಸರುಗಳು ಗುಂಪು, ಜಾತಿ, ಧರ್ಮಗಳ ರಾಜಕೀಯಕ್ಕೆ ದುರ್ಬಳಕೆಯಾಗಕೂಡದು.

 4. ಟೀನಾ, ನಿಮ್ಮ ಸಲಹೆಯನ್ನ ನಾವು ಪರಿಗಣಿಸುತ್ತೇವೆ.
  ಆದರೆ, ಗಗನ್ ಯಾರು ಮತ್ತು ಕುಸುಮ ಯಾರು..? ಅವರ ಹೆಸರನ್ನೇಕೆ ಇಡಬೇಕು ಅನ್ನುವುದರ ಬಗ್ಗೆ ಗಂಭೀರ ಚರ್ಚೆಯಾಗಲಿ..!!!! 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s