ಯಡ್ಡಿಯ ಸಿಎಂ ಸೀಟ್ ಥಿಯರಿ..!

ಯಡ್ಡಿಯ ಸಿಎಂ ಸೀಟ್ ಥಿಯರಿ ಏನು? ಸಿಎಂ ಸೀಟ್ ಅಂದ್ರೆ ಯಡ್ಡಿಯ ದೃಷ್ಟಿಯಲ್ಲಿ ಏನು?

Advertisements

ಭಟ್ಟರೇ, ತಪ್ಪಾಯ್ತು. ಓಕೆ. ಆದ್ರೆ, ತಿದ್ದಿಕೊಳ್ಳಲಿಲ್ಲ..!

What happens In Marriage
ಪಂಚ್ ಲೈನ್ ಬ್ಲಾಗಿನಲ್ಲಿ ವರ್ಷದ ಹಿಂದೆ ಪ್ರಕಟವಾದ ಪಂಚ್ ಲೈನ್.

ಮದುವೆ ಮನೆಯಲ್ಲಿ ಮತ್ತು ಕಾಲೇಜು ಕ್ಯಾಂಟೀನಲ್ಲಿ...

ಕನ್ನಡ ಪ್ರಭದಲ್ಲಿ "ಎತ್ತಿಕೊಂಡ" ವಕ್ರತುಂಡೋಕ್ತಿ.

ಈ “ವಕ್ರತುಂಡೋಕ್ತಿ” ಸುವರ್ಣ ನ್ಯೂಸಿನ ಬೆಳಗಿನ ” ಗುಡ್ ಮಾರ್ನಿಂಗ್ ” ಕಾರ್ಯಕ್ರಮದಲ್ಲೂ ವಕ್ರತುಂಡೋಕ್ತಿ ಹೆಸರಿನಡಿಯಲ್ಲಿ ವಾಚಿಸಲ್ಪಟ್ಟಿತು..!

ಭಟ್ಟರಿಗೆ ಪ್ರೀತಿಯಿಂದ ಮೇಲ್ ಮಾಡಿದೆ, ಸರ್ ಹಿಂಗ್ ಆಗಿದೆ ಅಂತಾ. ಅವರು ನಾಚಿಕೊಂಡರು ಅನ್ಸುತ್ತೆ. ಇನ್ನೂ ಉತ್ತರಿಸಿಲ್ಲ..!

ನನಗೇನೂ ಇದನ್ನ ದೊಡ್ಡ ಇಶ್ಯು ಮಾಡಬೇಕಾದ ಅನಿವಾರ್ಯತೆ ಇಲ್ಲ. ಅವರ ಉತ್ತರಕ್ಕಾಗಿ ಕಾದು ಕಾದು ಸುಸ್ತಾಗಿ, ಇದನ್ನ ಪ್ರಕಟಿಸಬೇಕಾದ ಅನಿವಾರ್ಯತೆ ಬಂತು. ಆದರೆ, ಅಪ್ರಾಮಾಣಿಕತೆಯನ್ನ ಸಹಿಸಿಕೊಳ್ಳಬೇಕ್ಯಾಕೆ? ಒಂದು ಬಾರಿ ಆದ್ರೆ, ತಪ್ಪು ಅನ್ನಿಸುತ್ತೆ. ಮತ್ತೊಂದುಬಾರಿ ಮಾಡಿದರೆ..?

ನನ್ನ ಮೇಲೆ ನಂಬಿಕೆ ಬಾರದಿರಬಹುದು. ಗೂಗಲ್ ನಲ್ಲಿ ಲಿಸ್ಟ್ ಆಗುವುದನ್ನಾದರೂ ನಂಬುತ್ತೀರಲ್ಲ. ನನ್ನ ಪಂಚ್ ಲೈನ್ ವರ್ಷದ ಹಿಂದೆ ಲಿಸ್ಟ್ ಆಗಿದ್ದನ್ನ ರೆಫರೆನ್ಸ್ ಆಗಿ ನೀಡುತ್ತಿದ್ದೇನೆ. ನೀವೂ ಬೇಕಾದರೆ ಗೂಗಲ್ ನಲ್ಲಿ ಈ ವಾಕ್ಯವನ್ನ ಟೈಪಿಸಿ ನೋಡಿ.

“ಮದುವೆ ಮನೆಯಲ್ಲಿ ಮತ್ತು ಕಾಲೇಜು ಕ್ಯಾಂಟೀನಲ್ಲಿ”

Google Listing for punchline.wordpress.com blog
Google Listing for punchline.wordpress.com blog

ಭಟ್ಟರೇ ಹೀಗೇಕೆ. ನನ್ನ ಮೆಚ್ಚಿನ ಬರಹಗಾರರು ನೀವು. ನೀವೇ ಹೀಗಾದರೆ ಹೇಗೆ?